== ಭಾರತದಲ್ಲಿ ಹುಲಿಗಳ ಸಂತತಿಯಲ್ಲಿ ಏರಿಕೆ == ವಿಶ್ವದ ಹುಲಿಗಳ ಪೈಕಿ ಶೇ 70 ರಷ್ಟು ಭಾರತದ­ಲ್ಲಿವೆ. ವಿಶೇಷ ಎಂದರೆ ದೇಶದಲ್ಲಿಯೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ಕರ್ನಾಟಕ. 2014ರ ಗಣತಿ ಪ್ರಕಾರ ದೇಶದ­ಲ್ಲಿನ ಹುಲಿಗಳ ಸಂಖ್ಯೆ 2,226. ಈ ಹಿಂದೆ 2010ರಲ್ಲಿ ನಡೆಸಿದ ಗಣತಿ­ಯಲ್ಲಿ 1,706 ಹುಲಿಗಳು ಪತ್ತೆ­ಯಾ­ಗಿ­ದ್ದವು. ಅಂದರೆ ಇದು ಶೇ 30 ರಷ್ಟು ಹೆಚ್ಚಳ.2014ರಲ್ಲಿ ದೇಶದಾದ್ಯಂತ ನಡೆಸ­ಲಾದ ಗಣತಿ ವರದಿ­­ 20/1/2015 ರಂದು ಬಿಡುಗಡೆಯಾಯಿತು. ವಿಶ್ವದಾದ್ಯಂತ ಹುಲಿಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. 2006ರಲ್ಲಿ 1,411ರಷ್ಟಿದ್ದ ಹುಲಿಗಳ ಸಂಖ್ಯೆ 2010ರಲ್ಲಿ 1,706ಕ್ಕೆ ಏರಿತ್ತು. 18 ರಾಜ್ಯಗಳ 3.78 ಲಕ್ಷ ಚದರ ಕಿ.ಮೀ.ಗಳಲ್ಲಿ ಹುಲಿ­ಗಣತಿ ನಡೆಸ­ಲಾಯಿತು. ಒಟ್ಟು 1,540 ಹುಲಿಗಳ ವಿಶೇಷ ಚಿತ್ರ­ಗಳನ್ನು ತೆಗೆಯಲಾಯಿತು. ಭಾರತದ ಶೇ 80 ರಷ್ಟು ಹುಲಿಗಳ ಚಿತ್ರಗ­ಳನ್ನು ತೆಗೆಯ­ಲಾಯಿತು. ಇದಕ್ಕಾಗಿ 9,735 ಕ್ಯಾಮೆರಾ­ಗಳನ್ನು ಬಳಸಲಾಯಿತು. ವಿಶ್ವದ ಯಾವುದೇ ದೇಶದಲ್ಲಿ ಇಷ್ಟೊಂದು ಸಂಖ್ಯೆಯ ಚಿತ್ರಗಳನ್ನು ಸೆರೆ­ಹಿಡಿಯಲಾಗಿಲ್ಲ. === ಏರಿಕೆ ಕಾರಣ === ಬೇಟೆ ನಿಯಂತ್ರಣ, ಮಾನವ –ಪ್ರಾಣಿ ಸಂಘರ್ಷ ಕಡಿಮೆ­ಯಾಗಿ­ರುವು­ದರಿಂದ ಹುಲಿಗಳ ಸಂಖ್ಯೆಯಲ್ಲಿ ಏರಿಕೆ­ಯಾಗಿದೆ ಎಂದು -ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದರು. ಪಶ್ಚಿಮ ಘಟ್ಟ ವಿಶ್ವದ ಹುಲಿ ಕೇಂದ್ರ ಜೀವ ವೈವಿಧ್ಯ ಸಮೃದ್ಧ ಪಶ್ಚಿಮ ಘಟ್ಟ ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ. ಪಶ್ಚಿಮ ಘಟ್ಟಗಳಲ್ಲಿನ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂಬುದನ್ನು ಈ ಗಣತಿ ದೃಢಪಡಿಸಿದೆ. ಮುದುಮಲೈ, ಬಂಡೀಪುರ, ನಾಗರಹೊಳೆ, ವಯನಾಡು, ಗೋವಾ ಸೇರಿ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ವಿಶ್ವದಲ್ಲೇ ಅತ್ಯಧಿಕ ಹುಲಿಗಳು ಪತ್ತೆಯಾಗಿವೆ. 2014 ರ ಗಣತಿ ಪ್ರಕಾರ ಇಲ್ಲಿ 776 ಹುಲಿಗಳಿವೆ. ಇದರಲ್ಲಿ ಕರ್ನಾಟಕ ಭಾಗದಲ್ಲಿ 406, ಕೇರಳದಲ್ಲಿ 136 ಮತ್ತು ತಮಿಳುನಾಡಿನಲ್ಲಿ 229 ಹುಲಿಗಳಿವೆ. ಕಳೆದ ಬಾರಿಯ ಗಣತಿಯಲ್ಲಿ ಗೋವಾದಲ್ಲಿ ಒಂದೂ ಹುಲಿ ಸಿಕ್ಕಿರಲಿಲ್ಲ. ಈ ಬಾರಿ 5 ಪತ್ತೆಯಾಗಿವೆ. == ಭಾರತದಲ್ಲಿ ಹುಲಿಗಣತಿ ವಿವರ == == ಭಾರತದ ಹುಲಿಗಳು == == ನೋಡಿ: == ಹುಲಿ ಬಿಳಿ ಹುಲಿ == ಹೊರ ಸಂಪರ್ಕ == ಹುಲಿ ಸಂರಕ್ಷಣೆ:[೧]ಕೆಲವು ಫೋಟೊಗಳು. == ಉಲ್ಲೇಖ == ೧).21/1/2015/